ಝೀನೋ 1 -
474ರಿಂದ 491ರ ವರೆಗೆ ಪೂರ್ವ ರೋಮನ್ (ಬಿಜಾóಂಟಿನ್) ಚಕ್ರವರ್ತಿ. ಐಸಾóರಿಯನ್ ವಂಶದಲ್ಲಿ ಜನಿಸಿದ ಇವನ ಪೂರ್ವದ ಹೆಸರು ಟರಾಸಿಕೋಡಿಸ್ಸ. ಒಂದನೆಯ ಲಿಯೋ ಚಕ್ರವರ್ತಿಯ ಮಗಳನ್ನು ಮದುವೆಯಾದ ಮೇಲೆ ತನ್ನ ಹೆಸರನ್ನು ಜೀóನೋ ಎಂದು ಬದಲಾಯಿಸಿಕೊಂಡ. ಚಕ್ರವರ್ತಿಯಾಗುವ ಮುನ್ನ ಚಕ್ರಾಧಿಪತ್ಯದ ಸೈನ್ಯ ಮತ್ತು ಪಹರೆಯ ಅಧಿಪತಿಯಾಗಿದ್ದ. 469ರಲ್ಲಿ ಕಾನ್‍ಸಲ್ ಪದವಿಗೆ ಏರಿಸಲ್ಪಟ್ಟ. ಲಿಯೋನ ಮಂತ್ರಿಯಾಗಿದ್ದ ಆಸ್ಟಾರನನ್ನು 471ರಲ್ಲಿ ಕೊಲೆ ಮಾಡಿಸಿ, 474ರಲ್ಲಿ ಲೊಯೋನ ಮರಣಾ ನಂತರ ಜಿóೀನೋನ ಏಳು ವರ್ಷಗಳ ಮಗ 2ನೆಯ ಲಿಯೋ ಚಕ್ರವರ್ತಿಯಾದ. ಜಿóೀನೋ ಸಹ ಚಕ್ರವರ್ತಿಯಾದ. 2ನೆಯ ಲಿಯೋ ಅದೇ ವರ್ಷ ತೀರಿಕೊಂಡ. ಜೀóನೋ ತನ್ನ ಸಂಪೂರ್ಣ ಹತೋಟಿ ಸ್ಥಾಪಿಸಿವ ಮೊದಲೇ ಬ್ಯಾಸಿ ಲಿಸ್ಕಸ್ ಇವನನ್ನು ಓಡಿಸಿ, 475ರಲ್ಲಿ ತಾನೇ ಚಕ್ರವರ್ತಿ ಎಂದು ಘೋಷಿಸಿ ಕೊಂಡ. ಜಿóೀನೋ ಹತಾಶನಾಗಲಿಲ್ಲ. ಸಿಂಹಾಸನವನ್ನು ತನ್ನದಾಗಿಸಿಕೊಳ್ಳಲು ಒಳಸಂಚುಹೂಡಿದ. ಬ್ಯಾಸಿಲಿಸ್ಕನ ಸೇನಾಧಿಪತಿ ಹಾಗೂ ಸೋದರಳಿಯ ಹರ್‍ಮೆಟಿಯನನ್ನು ಹಣ ಕೊಟ್ಟು ವಶಪಡಿಸಿಕೊಂಡು ಬ್ಯಾಸಿಲಿಸ್ಕಸನನ್ನು ಪದಚ್ಯುತಗೊಳಿಸಿ, 477ರಲ್ಲಿ ರಾಜಧಾನಿ ಕಾನ್‍ಸ್ಟಾಂಟಿನೋಪಲನ್ನು ಮರಳಿ ಪಡೆದ. ಬ್ಯಾಸಿಲಿಸ್ಕಸ್‍ಕೆಲವೇ ದಿನಗಳಲ್ಲಿ ಮರಣಹೊಂದಿದ, ಆದರೆ ಜಿóೀನೋನ ಸಂಕಷ್ಟಗಳು ಇಲ್ಲಿಗೆ ಮುಗಿಯಲಿಲ್ಲ. 478ರಲ್ಲಿ ಗಾತರ ಆಕ್ರಮಣವನ್ನು ಎದುರಿಸಬೇಕಾಯಿತು. ಅವರಿಗೆ ಹಣಕೊಟ್ಟು ಅವರು ಹಿಂತಿರುಗುವಂತೆ ಮಾಡಿದ. 479ರಲ್ಲಿ ಕಾನ್‍ಸ್ಟಾಂಟಿನೋಪಲಿನಲ್ಲಿ ದಂಗೆ ಎದ್ದಾಗ, ಅದರಲ್ಲಿ ಪಾಲ್ಗೊಂಡ ಸೈನಿಕರಿಗೆ ಲಂಚ ತಿನ್ನಿಸಿ ಅದನ್ನು ಹತ್ತಿಕ್ಕಿದ. ಎರಡನೆಯ ಗಾತಿಕ್ ಆಕ್ರಮಣ ನಡೆಸಿದಾಗ ಅವರು ವಿರೋಧ ಪಕ್ಷದವರಿಗೆ ಹಣ ಕೊಟ್ಟು ಅವರನ್ನು ವಶಪಡಿಸಿಕೊಂಡು, ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿದ. ಆಸ್ಟ್ರೊಗಾತರ ಮುಖಂಡನಾದ ತೀಯೊಡೋರಿಕನನ್ನು 484ರಲ್ಲಿ ಇಟಲಿಯಲ್ಲಿ ಕಾನ್ಸಲ್ ಆಗಿ ನೇಮಿಸಿದ. ಜಿóೀನೋನ ಆಡಳಿತ ಕಾಲದಲ್ಲಿ ನಡೆದ ಸಂಗತಿಗಳಲ್ಲಿ ಮುಖ್ಯವಾದುದೆಂದರೆ ಅವನು ಮಾನೊಫಿಸೈಟ್ಸ್ ಮತ್ತು ಸಾಂಪ್ರದಾಯಿಕ ಚರ್ಚ್ ನಡುವಣ ವಿರಸವನ್ನು ಕೊನೆಗೊಳಿಸಲು ನಡೆಸಿದ ಪ್ರಯತ್ನ. 482ರಲ್ಲಿ ಹಿಸೋಟಿಕಾನ್ ಎಂಬ ಪತ್ರವನ್ನು ಈಜಿಪ್ಟಿನ ಚರ್ಚಿಗೆ ಬರೆದ. ಇದನ್ನು ಮಾನೊಫಿಸೈಟರು ಒಪ್ಪಿ ಕೊಂಡರು. ಪೂರ್ವ ಚಕ್ರಾಧಿಪತ್ಯದಲ್ಲಿ ತಕ್ಕಮಟ್ಟಿನ ಮತೀಯ ಶಾಂತಿ ನೆಲೆಸಿತು. ಆದರೆ ರೋಮಿನೊಂದಿಗೆ ಸ್ವಲ್ಪ ವಿರಸ ಬೆಳೆಯಿತು. ತನ್ನ ಆಳ್ವಿಕೆಯ ಕಾಲದಲ್ಲಿ ಜಿóೀನೋ ಜನಪ್ರಿಯತೆಗಳಿಸಲಿಲ್ಲ. ಇವನು 491ರಲ್ಲಿ ತೀರಿಕೊಂಡ.
(ಎಚ್.ವಿ.ಎಸ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ